Popular Posts

Sunday, March 6, 2011

ಒಂದು ಮಧುರ ಮೋಸ!

ಸಧ್ಯಕ್ಕೆ ನಾನಿರೋದು R.T.Nagar ದಲ್ಲಿರೋ ಸಾಯಿಬಾಬಾ ಮಂದಿರದ ಹಿಂದುಗಡೆ ಇರುವ ಒಂದು flatನಲ್ಲಿ. ಪ್ರತಿ ಗುರುವಾರ ಮಧ್ಯಾಹ್ನ ಸಾಯಿಬಾಬಾ ಮಂದಿರದಲ್ಲಿ ಅನ್ನ ದಾಸೋಹ ಇರುತ್ತದೆ. ಆದರೆ ಅಲ್ಲಿಗೆ ನಾನೆಂದೂ ಹೋದವನಲ್ಲ. ನಮ್ಮ ಅನ್ನ ಸ್ವಾಹ ಏನಿದ್ದರೂ ಪಕ್ಕದ main roadನಲ್ಲಿರೋ ‘ಶುಚಿ ಸಾಗರ್’ ಎಂಬ ಹೋಟೇಲಿನಲ್ಲಿ. "ಶುಚಿ ಸಾಗರ್"!! ಪಕ್ಕದ ಫೋಟೋ ನೋಡಿ ಇಲ್ಲೇನೋ spelling mistake ಇದೆಯಾ..? ಅದು "ಸಿಚಿ ಸಾಗರ್" ಇರಬಹುದಾ ಅಂತ ನಿಮಗನಿಸಬಹುದು. ಆದರೆ ನಂಬಿ... ಆ ಹೋಟೇಲಿನ ನಿಜವಾದ ಹೆಸರು ‘ಸಿಚಿ ಸಾಗರ್’ ಅಂತಾನೇ. ಸುಮಾರು 2 ತಿಂಗಳವರೆಗೂ ನಾನು ಕೂಡ "ಶುಚಿಸಾಗರ" ಅಂತಾನೆ "ನಂಬಿ"ಕೊಂಡು ಬಂದಿದ್ದೆ!!.
 
ನಾನು R.T.Nagarಕ್ಕೆ ಬಂದು ಆಗ 2 ತಿಂಗಳಷ್ಟೆ ಆಗಿತ್ತು. ಗೆಳೆಯ ನವೀನ್ ಸಾಗರ phone ಮಾಡಿ ಬರುತ್ತೇನೆ ಅಂದಾಗ ಅವನಿಗೆ ಅಡ್ರೆಸ್ ಹೇಳಿ ‘ಶುಚಿ ಸಾಗರ’ದ ಎದುರು ಬಂದಾಗ ಫೋನ್ ಮಾಡು ಅಂದಿದ್ದೆ. ಅವನು ಫೋನ್ ಮಾಡಿ "ಮಾರಾಯ ಹೋಟೇಲ್ ‘ಸಿಚಿ ಸಾಗರ’ದ ಎದುರು ನಿಂತಿದ್ದೇನೆ. ನೀನು ಹೇಳಿದ ‘ಶುಚಿ ಸಾಗರ’ ಎಲ್ಲೂ ಕಾಣಿಸ್ತಾ ಇಲ್ವೋ... ಇಲ್ಲಿರೋದು ಸಿಚಿಸಾಗರ ಮಾತ್ರ ಕಣೋ" ಅಂದ. ನನಗೆ ನಂಬೋಕೆ ಆಗ್ಲಿಲ್ಲ. ಎರಡು ತಿಂಗಳಿಂದ ದಿನಕ್ಕೆ 3 ಬಾರಿಯಂತೆ ಅದೇ ಹೋಟೇಲ್‍ಗೆ ಹೋಗಿದ್ದೆ. ನನ್ನಿಂದ ಇಷ್ಟು ದೊಡ್ಡ ಕಣ್ತಪ್ಪೆ..! ನಿನ್ನ ಹೆಸರಲ್ಲೇ ಸಾಗರ ಇರೋದ್ರಿಂದ ನೀನು ಸುಲಭವಾಗಿ ತಪ್ಪನ್ನ ಕಂಡುಹಿಡಿದೆ ಅಂತ ಗೆಳೆಯ ನವೀನ್ ಸಾಗರನನ್ನು ಕಿಚಾಯಿಸಿದ್ದೆ.


ಈಗ ಬಿಡಿ... ಹೋಟೇಲಿನ ಎಲ್ಲ ಸಿಬ್ಬಂದಿ ವರ್ಗದವರ ಜೊತೆ ಒಂದು ಅವಿನಭಾವ ಬಾಂಧವ್ಯ ಬೆಳೆದಿದೆ. ನನಗೀಗ ಅಲ್ಲಿ ವಿಶೇಷವಾದ ಗೌರವ ಸಿಗುತ್ತದೆ. ಹೋಟೇಲಿಗೆ ಕಾಲಿಟ್ಟೊಡನೆ ಕ್ಲೀನರ್‌ನಿಂದ ಹಿಡಿದು ಕ್ಯಾಶಿಯರ್‌ವರೆಗೂ ಎಲ್ಲರೂ ಒಂದು ವೆಲ್ ಕಮ್ ನಗುವನ್ನು ನನ್ನೆಡೆಗೆ ಚೆಲ್ಲುತ್ತಾರೆ. ಅಲ್ಲಿರೋರಲ್ಲಿ ನಮ್ಮ ಕುಂದಾಪುರ-ಉಡುಪಿಗೆ ಸೇರಿದವರ ಸಂಖ್ಯೆ ಜಾಸ್ತಿ ಇರುವುದರಿಂದ, ಬಾಂಧವ್ಯನೂ ಸ್ವಲ್ಪ ಜಾಸ್ತಿನೇ ಇದೆ. ಬಿಸಿಬೇಳೆಬಾತ್ order ಮಾಡಿದ್ರೆ, ಒಂದು ಸೌಟು ಹೆಚ್ಚಿಗೆ ಹಾಕಿ ನನ್ನೆದುರು ತಂದಿಡುತ್ತಾರೆ. ಅಷ್ಟೊಂದು ಪ್ರೀತಿ ನನ್ನ ಮೇಲೆ. ಅವರು ಆ ಪ್ರೀತಿ ತೋರಿಸಿದಾಗಲೆಲ್ಲಾ ನನಗೆ "ಆ" ಘಟನೆ ನೆನಪಾಗಿ ಮನಸ್ಸಲ್ಲಿ ಏನೋ ಒಂಥರ ಕಸಿವಿಸಿಯಾಗುತ್ತದೆ.


ಒಂದು ವರ್ಷದ ಹಿಂದಿನ ಮಾತು. ಹೋಟೇಲಿನವರ ಜೊತೆಗೆ ನನಗಿನ್ನೂ ಬಾಂಧವ್ಯ ಕುದುರಿಲ್ಲದ ದಿನವದು. ನಾನು ಆ areaಗೆ ಬಂದು 2 ತಿಂಗಳಷ್ಟೆ ಆಗಿತ್ತು. ಅಂದು ಮಧ್ಯಾಹ್ನ north indian meals ಆರ್ಡರ್ ಮಾಡಿ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕೂತಿದ್ದೆ. "ಸರ್ ನಮಸ್ಕಾರ " ಎಂಬ ಮಾತಿನೊಂದಿಗೆ ವ್ಯಕ್ತಿಯೊಬ್ಬ ನನ್ನೆದುರಿನ ಖುರ್ಚಿಯ ಮೇಲೆ ಬಂದು ಸ್ಥಾಪಿತನಾದ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ನೆನಪಿಸಿಕೊಳ್ಳೋ ಪ್ರಯತ್ನ ಮಾಡಿದೆವು... ಕೊನೆಗೆ ಆತನೇ ನನ್ನ ಮೌನ ಮುರಿದು "ಸರ್... ನೀವು ಸಿನೆಮಾದಲ್ಲಿ work ಮಾಡುತ್ತೀರಿ ತಾನೇ..?" ಅಂದಾಗ ಹೌದು ಅಂತ ತಲೆಯಾಡಿಸಿದೆ. ಅವನು "ನಾನು ಸಾರ್..! ನೀವು ‘ಸವಿ ಸವಿ ನೆನಪು’ ಚಿತ್ರದಲ್ಲಿ associate director ಆಗಿದ್ದಾಗ, ನಿಮ್ಮ ಹತ್ರ ನಟನೆಗಾಗಿ chance ಕೇಳಿಕೊಂಡು ಬಂದಿದ್ದೆ. ನೀವು ಕೊಡುತ್ತೀನಿ ಅಂತ promise ಮಾಡಿ, ಕೊನೆಗೆ ಕೊಡಲೇ ಇಲ್ಲ" ಅಂದ. ಉಹುಂ ನನಗೆ ನಿಜಕ್ಕೂ ಅವನು ಹೇಳಿದ ಘಟನೆ ನೆನಪಿಗೆ ಬರಲೇ ಇಲ್ಲ. ನಾನು ಮರೆತಿರುವುದನ್ನೆ ಆತ ನನ್ನ ಅಹಂಕಾರ ಅಂದುಕೊಂಡಾನೋ ಅಂತ ಭಾವಿಸಿ, ಬಲವಂತದ ನಗುವನ್ನು ತಂದುಕೊಂಡು ಅವನಿಗೆ ಶೇಕ್ ಹ್ಯಾಂಡ್ ಕೊಟ್ಟು ಹೇಗಿದ್ದೀರಿ ಅಂತ ಕೇಳಿದೆ. ಇದನ್ನೆಲ್ಲಾ ಅಲ್ಲೇ ನಿಂತು ಗಮನಿಸುತ್ತಿದ್ದ ಹೋಟೇಲ್‍ನ supplier ಆ ವ್ಯಕ್ತಿಗೆ ಏನು ಬೇಕೆಂದು ಕೇಳಿದ. ಆತನೂ north indian meals ಅಂತ order ಕೊಟ್ಟ.


ಜೊತೆಯಲ್ಲಿ ಊಟಮಾಡುತ್ತಾ ಇಬ್ಬರ ನಡುವೆ ಚಿತ್ರರಂಗದ ಆಗು-ಹೋಗುಗಳ ಬಗ್ಗೆ discussion ನಡೆಯಿತು. ಆತ ನನಗಿಂತ ಬೇಗ ಊಟ ಮುಗಿಸಿದ್ದ. ಕೈ ತೊಳೆಯಲು ಹೋದವನು ವಾಪಸ್ಸು ಬರುವಾಗ mobileನಲ್ಲಿ ಮಾತನಾಡುತ್ತಾ ಬಂದು ನನಗೆ ಶೇಕ್ ಹ್ಯಾಂಡ್ ಕೊಟ್ಟು "ಸರ್... important ಫೋನ್ ಕಾಲ್ ಇದೆ. ಮತ್ತೊಮ್ಮೆ ಸಿಗುತ್ತೇನೆ" ಎಂದು ಹೇಳಿ ಹೊರಟು ಹೋದ. ನಾನು ನಿಧಾನಕ್ಕೆ ಊಟ ಮುಗಿಸಿ ಕೈತೊಳೆದುಕೊಂಡು ಮತ್ತೆ ಟೇಬಲ್ಲಿಗೆ ಬಂದಾಗ, ನನ್ನ ಬಿಲ್ಲು(bill) ನನಗಾಗಿ ಕಾದಿತ್ತು. ಬಿಲ್ಲನ್ನು ತೆಗೆದುಕೊಂಡು 50 ರೂ ನೋಟಿನ ಜೊತೆಗೆ ಕ್ಯಾಶಿಯರ್‌ಗೆ ಕೊಟ್ಟಾಗ, ಆತ "ಸರ್... 90 ರೂಪಾಯಿ ಆಗಿದೆ" ಅಂದ. ಒಂದು north indian mealsಗೆ 45 ರೂಪಾಯಿ ಅನ್ನುವುದು ನನಗೆ ಚೆನ್ನಾಗಿ ನೆನಪಿತ್ತು. ಕೂಡಲೇ ಬಿಲ್ಲನ್ನು ನೋಡಿದಾಗ ಅದರಲ್ಲಿ ಆತನ ಊಟದ ಚಾರ್ಜನ್ನೂ ಸೇರಿಸಲಾಗಿತ್ತು. ನಾನು ಕೂಡಲೇ "ಆತ ನನ್ನ ಗೆಳೆಯನಲ್ಲ. ಎಲ್ಲೋ ನೋಡಿದ ನೆನಪಷ್ಟೆ. ಆತನ ಬಿಲ್ಲನ್ನು ನನ್ನ ಜೊತೆ ಸೇರಿಸಿದ್ದು ಎಷ್ಟು ಸರಿ" ಎಂದು ತಗಾದೆ ತೆಗೆದೆ. ಮಾಣಿ confusion ಮಿಶ್ರಿತ ಭಯದಲ್ಲಿ ಏನೂ ಮಾತನಾಡುವುದೆಂದು ತಿಳಿಯದೆ ಒದ್ದಾಡಿದ. ನಾನು ಕೂಡಲೇ "ಹೋಗ್ಲಿ ಬಿಡಿ. ಮುಂದಿನ ಬಾರಿ ಹುಷಾರಾಗಿರಿ" ಎಂದು ಇನ್ನೊಂದು 50 ರ ನೋಟನ್ನ ಕ್ಯಾಶಿಯರ್ ಟೇಬಲ್ ಮೇಲಿಟ್ಟೆ. ಆತ 5 ರೂ ಚಿಲ್ಲರೆ ಜೊತೆ 50 ರ ನೋಟನ್ನು ವಾಪಸ್ಸುಕೊಡುತ್ತಾ "ಸ್ಸಾರಿ ಸರ್... ನಮ್ಮದೆ ತಪ್ಪು. ನಮ್ಮ ಹುಡುಗ ಕೇಳಿ ಬಿಲ್ ಮಾಡಬೇಕಿತ್ತು. ಸ್ಸಾರಿ... ಥ್ಯಾಂಕ್ ಯೂ" ಅಂದ. ನಾನು ನೋಟನ್ನು ಚಿಲ್ಲರೆಯನ್ನು ಜೇಬಿಗಿಳಿಸಿ ಮನೆಕಡೆ ಹೆಜ್ಜೆ ಹಾಕಿದೆ.


ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದೆ. Door ಒಪನ್ ಆದಾಗ ಅದೇ ‘ಆತ’ ಕಣ್ಣು ಮಿಟುಕಿಸಿ ನಗುತ್ತ ಎದುರಲ್ಲಿ ನಿಂತಿದ್ದ. ನಾನು ಒಮ್ಮೆ serious ಆಗಿ ಅವನ ಕಡೆ look ಕೊಟ್ಟು ನಂತರ ಪಳ್ಳನೆ ನಕ್ಕು ಒಳಗೆ ಹೋದೆ. ಇಬ್ಬರೂ 10 ನಿಮಿಷ uncontrolled ಆಗಿ ನಾನ್ ಸ್ಟಾಪ್ ನಗು ನಕ್ಕೆವು. ‘ಆತ’ ಅದೇ ಗೆಳೆಯ. ಶುಚಿಯಲ್ಲ ಸಿಚಿ ಎಂದು ‘ಕಣ್ಣು ತೆರೆಸಿದ್ದ’ ನವೀನ್ ಸಾಗರ.!! ಆವತ್ತು ನನ್ನ ಜೇಬಿನಲ್ಲಿದದ್ದು 100 ರೂಪಾಯಿ ಮಾತ್ರ. ಹಾಗೂ ಅವನ ಜೇಬಿನಲ್ಲಿ ಬಿಡಿಗಾಸೂ ಇರಲಿಲ್ಲ. ಇರುವ 100 ರೂಪಾಯಿಯಲ್ಲಿ ನಾನು ನಾಳೆ(ಗಳನ್ನು)ಯನ್ನು ಕಳೆಯಬೇಕಾಗಿತ್ತು. ನಾಡಿದ್ದು ನನಗೆ ದುಡ್ಡು ಬರುವುದಿತ್ತು( ನಂಬಿ!). ಅಂಥ ದಿನದಲ್ಲಿ ಇಂಥ ಮೋಸವೊಂದು ನಡೆದುಹೋಯಿತು. ಅದರ ಬಗ್ಗೆ ನನಗೆ ವಿಷಾದವಿಲ್ಲ. ಅದಕ್ಕೆ ನಾನದನ್ನು ಕರೆಯುತ್ತೇನೆ "ಒಂದು ಮಧುರ ಮೋಸ" ಎಂದು.


ಈಗಲೂ ನಾನು ಆ ಹೋಟೇಲಿನ ಖಾಯಂ ಗಿರಾಕಿ. ಆದರೆ ನನ್ನ ಗೆಳೆಯ ನವೀನ್ ಸಾಗರ್ ಬಂದಾಗ ಮಾತ್ರ ಬೇರೆ ಹೋಟೇಲ್ ಹುಡುಕಿಕೊಂಡು ಹೋಗುತ್ತೇವೆ. ಎಲ್ಲಾದರೂ ಆ supplier ನಮ್ಮನ್ನು ಗುರುತಿಸಬಹುದು ಎಂಬ ಭಯ ಗೆಳೆಯ ನವೀನನಿಗೆ!. ದುಡ್ಡಿದ್ದರೂ ಆ ಹೋಟೇಲ್‍ಗೆ ಹೋಗದೆ ಇರೋ ಥರ ಮಾಡ್ಬಿಟ್ಟೆಯಲ್ಲೊ ಪಾಪಿ ಅಂತ ಅವನು ನಗುನಗುತ್ತಾ ರೇಗುತ್ತಾನೆ. ರೇಗಲಿ ಬಿಡಿ. ಯಾಕೆಂದರೆ ಆವತ್ತಿನ ನಮ್ಮ ಮೋಸಕ್ಕೆ screenplay ಹೆಣೆದು ನಿರ್ದೇಶನ ಮಾಡಿದ್ದು ನಾನೇ...!

5 comments:

 1. Very nice, but bejarandre dudidru Naveen Sagar avarge A hotelge hogakagalvala antha...

  ReplyDelete
 2. hah hah ha..... blog odhuvaaga nijvaaglu baikonde yavanappa avanu kachada nan maga antha poorthi odhidhmele ayyo ivana andhukonde (naveen sagar nanna ollle snehitha)

  ReplyDelete
 3. city jeevanada mattondu tunuku nota :)
  Navu kelavomme hege madirtheve..adre helkolakke mujgara...:)

  ReplyDelete
 4. super raghu...volle nataka ne madidira :)screenplay nu chennagide...

  ReplyDelete
 5. yappa..bhayankara khiladi :)

  ReplyDelete