
ಬ್ಲಾಗು ಬರೆಯೋದಕ್ಕೆ ಕಾರಣ? ಅಥವಾ ರಾಘು ಬರೆಯೋದಕ್ಕೆ ಕಾರಣ? ಇವರೆಡು ಪ್ರಶ್ನೆಗಳಲ್ಲಿ ಜಾಸ್ತಿ ವ್ಯತ್ಯಾಸ ಏನೂ ಇಲ್ಲ. ಅಂಥಹ ದೊಡ್ಡ ಕಾರಣನೂ ಇಲ್ಲ ಬಿಡಿ. ಅಸಲೀ ವಿಷಯ ಏನಾಪ್ಪ ಅಂದರೆ, ನನಗೆ ನನ್ನದೇ ಸ್ವಂತದ್ದೊಂದು ಬ್ಲಾಗು ಬರೆಯಬೇಕು ಅನ್ನೋದು ಬಹಳ ದಿನದ ಆಸೆಯಾಗಿತ್ತು. ಅದಕ್ಕಾಗಿ 6 ತಿಂಗಳ ಹಿಂದೆ ಈ ಬ್ಲಾಗನ್ನು ರೆಡಿ ಮಾಡಿಟ್ಟುಕೊಂಡು ಕೂತಿದ್ದೆ. ಆದರೆ ಒಂದಕ್ಷರಾನೂ ನನ್ನಿಂದ ಬರೆಯಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಬ್ಲಾಗು ಯಾಕೆ ಬೇಕು? ಅದನ್ನ ಯಾಕೆ ಬರೆಯಬೇಕು? ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಅದಕ್ಕೆ ಉತ್ತರವೂ ನನಗೆ ಬೇಕಿರಲಿಲ್ಲ. ಯಾಕೆಂದರೆ ಈ ಬ್ಲಾಗ್ನಿಂದ ನನಗೆ ಆಗಬೇಕಾದದ್ದು ಏನೂ ಇಲ್ಲ. ಆದರೂ ನಾನು ಬ್ಲಾಗು ಬರೆಯಬೇಕು. ಚಿಕ್ಕ ಮಗುವಿನಂಥ ಹಠ ನನ್ನದು. ಆ ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ. ಅದೊಂದು ಚಿಕ್ಕ ಆಸೆ ಅಷ್ಟೆ! ಇಂಥಹ ಚಿಕ್ಕ ಚಿಕ್ಕ ಆಸೆಗಳಿಂದ ಸಂತೋಷ ಪಡುವುದು ಚಟವಾಗಿ ಬಿಟ್ಟಿದೆ ನನಗೆ . ಆದರೆ ಈ ಆಸೆ ಮೊಳಕೆ ಒಡೆದದ್ದು ಒಂದು ಥರನಾದ jealousನಿಂದ ಅಂದರೆ ನೀವು ನಂಬಲೇ ಬೇಕು. ಹೌದು... ಹೊಟ್ಟೆಕಿಚ್ಚು ಪಡುವಂತೆ ಬರೆದ ಕೆಲವರ ಬ್ಲಾಗುಗಳನ್ನು ಓದಿ, ನನಗೂ ಬ್ಲಾಗು ಬರೆಯಬೇಕು ಅನ್ನಿಸಿತು. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಜೊತೆಗೆ ಇದರಿಂದ ನನಗೆ ಆಗುವ ನಷ್ಟವೇನೂ...? ಇದನ್ನು ಓದಿದವರಿಗೂ ಆಗುವ ನಷ್ಟವೇನು..? ಇವನ್ನೆಲ್ಲಾ ತುಂಬಾ deep ಆಗಿ ಯೋಚಿಸಿದಾಗ, ನನಗೇನೂ ಅಂಥಹ ಹೇಳಿಕೊಳ್ಳುವ ನಷ್ಟವಿಲ್ಲ. ಆದರೆ ಓದುವವರಿಗೆ...? ಎಲ್ಲೋ ಅವರಿಗೆ ನನ್ನ ಬರಹಗಳು ತಲೆನೋವು ತಂದರೆ, ಒಂದು ಅನಾಸಿನ್ waste ಆಗಬಹುದೇನೋ ಅಷ್ಟೇ..! ಅದು ಬಿಟ್ಟರೆ ಅವರಿಗೂ ಅಂಥಹ ಹೇಳಿಕೊಳ್ಳುವ ನಷ್ಟವಿಲ್ಲ. ಜೊತೆಗೆ face bookನಲ್ಲಿ ಕೆಮ್ಮಿದರೂ ರಿಪ್ಲೈ ಮಾಡುವಂಥ ನನ್ನ ಗೆಳೆಯರು, ನನ್ನ ಬರಹಕ್ಕೆ ಒಂದಷ್ಟು ಒಳ್ಳೆಯ ಕಮೆಂಟ್ ಮಾಡದೇ ಇರುತ್ತಾರೆಯೇ..? ಇಂಥಹ over confident ನಿಲುವುಗಳಿಂದ ಕೊನೆಗೂ ಬ್ಲಾಗು ಬರೆಯಲೇ ಬೇಕೆಂದು ನಿರ್ಧರಿಸಿದೆ.
adbuta opening! filter illada baraha aadaru U certificate iruva ee blogige olledaagali :)
ReplyDeletenija, blogaLu odugara priyavaaguva kaaraNa: adu 'straight from heart' aagiratte. adaralli yaavude booTaaTikeya maatu irodilla. nimma opening / intro sakkath ide. naanantu follow maaDtini :-)
ರಾಘು ಹಾಗೂ ಹೀಗೂ ಬ್ಲಾಗು ಆಗಿದ್ದಾರೆ...! ರಾಘು ಬ್ಲಾಗು ಅಂತ ಮಜವಾದ ಟೈಟಲೊಂದನ್ನು ಇಟ್ಟು.. ಅದನ್ನ ಹಾಗೇ ಖಾಲಿ ಬಿಟ್ಟು.... ಅವರು ಪಕ್ಕಾ ಸಿನಿಮಾ ಮಂದಿ ಅಂತ ಅನಿಸೋ ಹಾಗೆ ಮಾಡಿದ್ದರು..! ಟೈಟಲಿಟ್ಟು ಸಿನಿಮಾ ಮಾಡದವರ ಥರ!
ReplyDeleteಆದರೆ ಹೀಗೆ ಟೈಟಲಿಟ್ಟ ಆ ದಿನ ಮತ್ತು ಮೊದಲ ಬರಹ ಬರೆದ ಈ ದಿನದ ಮಧ್ಯೆ ಅವರು ಬಹಳಷ್ಟು ಓದಿಕೊಂಡಿದ್ದಾರೆ.. ಬರೆದರೆ ಹೇಗೆಲ್ಲಾ ಬರೀಬೇಕು.. ಹೇಗೆಲ್ಲ ಬರೀಬಾರ್ದು ಎಂಬೆಲ್ಲದರ ಬಗ್ಗೆ ತಿಳಿದುಕೊಂಡಿದ್ದಾರೆ.. ಅವರಿಂದ ಚೆಂದದ ಬರವಣಿಗೆ ನಿರೀಕ್ಷಿಸುತ್ತಿದ್ದೇನೆ.. ಹಾಗೂ ವಿಭಿನ್ನತೆಯನ್ನು ಕೂಡ.
ಆಲ್ ದ ಬೆಸ್ಟ್ ರಾಘೂ.. ಹಾಗೂ ಬ್ಲಾಗೂ... :)
too good raghu ! All the best... waiting for your further posts
ReplyDeleteಗೆಳೆಯ ರಾಘು, ಒಂದು ಉತ್ತಮ ಕೆಲಸಕ್ಕೆ ಕೈ ಹಾಕಿದ್ದೀರಿ. ಎಲ್ಲವೂ ಒಳ್ಳೆಯದಾಗಲಿ.
ReplyDeleteHmM;;)))) GOOD THINKING RAAGU ..KEEP IT UP ::)))
ReplyDeleteMAY GOD BLESS YOU...::)))
good yaar raghu...navanthu bari baribeku antha yochane madode aithu..nivu shuru ne madidira..superb brother.go ahead..wishing you luck..nanu definately vodthini...ella articles .cheers
ReplyDeleteHi Raghu your words are something special, its create more curiosity, Please continue your writing habit ur become a big writer its saying my sixth sense & all the best from Sangam
ReplyDeletethochiddu ok, adu gottagutte.... geechiddunoo ok kaanathaane ide... adre dochiddenappa.... nimmajji sumne prasana?? :)
ReplyDeleteದೋಚಿದ್ದು ಅಂದ್ರೆ... ಬೇರೆ ಕಡೆಯಿಂದ inspired ಆಗಿ ಬರೆದದ್ದು.
ReplyDelete