Popular Posts

Thursday, May 5, 2011

ಅಕ್ಷಯ ತೃತೀಯ, ಅಕ್ಷಯ ಪಾತ್ರೆಯಾಗಲಿ!

ಇವತ್ತು ಅಕ್ಷಯ ತೃತೀಯ. ಕನ್ನಡ ಪ್ರಭದ ಇಡಿ ಮುಖಪುಟವನ್ನೇ ಶುಭ್ ಜ್ಯುವೆಲ್ಲರ್ಸ್‍ನ ಜಾಹೀರಾತು ಆಕ್ರಮಿಸಿಕೊಂಡಿದೆ. TV ಚಾನೆಲ್ ತುಂಬೆಲ್ಲ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು ಹರಿದಾಡುತ್ತಿವೆ. ಅಕ್ಷಯ ತೃತೀಯ ಯಾವಾಗ ಹಬ್ಬವಾಯ್ತೋ ನನಗಂತು ನೆನಪಿಲ್ಲ. ಚಿನ್ನ ಖರೀಧಿಸುವವರಿಗಾಗಿಯೇ ಒಂದು ಹಬ್ಬವಂತೆ! ಯಾರಾದರೂ ಹಬ್ಬದೂಟಕ್ಕೆ ಕರೀತಾರೋ ಅಂತ ಕಾಯುತ್ತಿದ್ದೇನೆ. ಸದ್ಯಕ್ಕಂತೂ ಯಾರು ಕರೆದಿಲ್ಲ. ಯಾರಿಗೆ ಹಬ್ಬ ಇದೆಯೋ? ಇಲ್ಲವೋ? ಆದರೆ ಚಿನ್ನದಂಗಡಿಯವರಿಗಂತೂ ಹಬ್ಬವೋ ಹಬ್ಬ!

ಎಂಥಹ ವಿಪರ್ಯಾಸ ನೋಡಿ, ಒಂದು ಕಡೆ ಜನರು ಚಿನ್ನಕ್ಕಾಗಿ ಅಕ್ಷಯ ತೃತೀಯದಂದು ಮುಗಿಬೀಳುತ್ತಿದ್ದರೆ, ಇನ್ನೊಂದು ಕಡೆ ಜನರು ಅನ್ನಕ್ಕಾಗಿ ಅಕ್ಷಯ ಪಾತ್ರೆಯ ಕಡೆ ನೋಡುತ್ತಿದ್ದಾರೆ. ನನ್ನ ಪ್ರಕಾರ ಈ ದೇಶದ ಬಡ ಜನರು ಯಾವಾಗ ಚಿನ್ನ ಖರೀಧಿಸುವಷ್ಟು ಶಕ್ತರಾಗುತ್ತಾರೋ ಅವತ್ತೆ ಅಕ್ಷಯ ತೃತೀಯ! ಗ್ರೀಟಿಂಗ್ಸ್ ಸೇಲ್ ಮಾಡೋಕೆ ಲವರ್ಸ್ ಡೇ ನಾ ಹೇಗೆ ಮಿಸ್‍ಯ್ಯೂಸ್ ಮಾಡಿಕೊಳ್ಳುತ್ತಿದ್ದಾರೋ... ಹಾಗೇಯೇ ಚಿನ್ನನ ಸೇಲ್ ಮಾಡೋಕೆ ಅಕ್ಷಯ ತೃತೀಯವನ್ನು ಬಳಸಿಕೊಳ್ಳುತ್ತಿದ್ದಾರೆ. ದುಡ್ಡಿದ್ದರೆ ಚಿನ್ನ ಖರೀಧಿಸಿ... ನಿಮ್ಮ ದುಡ್ಡು, ನಿಮ್ಮಿಷ್ಟ! ಆದರೆ ದುಡ್ಡು ಜಾಸ್ತಿ ಇದ್ದರೆ ಅಕ್ಷಯ ಪಾತ್ರೆಗೆ donate ಮಾಡಿ. ನಾನು ಆ ಕೆಲಸ ಮಾಡುತ್ತಿದ್ದೇನೆ. ಹಾಗಂತ ದುಡ್ಡು ಜಾಸ್ತಿ ಇದೆ ಅಂದ್ಕೊಬೇಡಿ! ನನ್ನಿಂದ ಆದಷ್ಟು ಸಹಾಯ ಮಾಡುತ್ತಿದ್ದೇನೆ. ಚಿಕ್ಕ ಅಳಿಲು ಸೇವೆ! ಆ ಕೆಲಸ ಇಂದೆ ಮಾಡಿದರೆ ಹೆಚ್ಚು ಅರ್ಥಗರ್ಭಿತವಾಗಿರುತ್ತದೆ. ಅಕ್ಷಯ ತೃತೀಯ, ಅಕ್ಷಯ ಪಾತ್ರೆಯಾಗಲಿ!