Popular Posts
-
ಸಧ್ಯಕ್ಕೆ ನಾನಿರೋದು R.T.Nagar ದಲ್ಲಿರೋ ಸಾಯಿಬಾಬಾ ಮಂದಿರದ ಹಿಂದುಗಡೆ ಇರುವ ಒಂದು flatನಲ್ಲಿ. ಪ್ರತಿ ಗುರುವಾರ ಮಧ್ಯಾಹ್ನ ಸಾಯಿಬಾಬಾ ಮಂದಿರದಲ್ಲಿ ಅನ್ನ ದಾಸೋಹ ಇರು...
-
ಬ್ಲಾಗು ಬರೆಯೋದಕ್ಕೆ ಕಾರಣ? ಅಥವಾ ರಾಘು ಬರೆಯೋದಕ್ಕೆ ಕಾರಣ? ಇವರೆಡು ಪ್ರಶ್ನೆಗಳಲ್ಲಿ ಜಾಸ್ತಿ ವ್ಯತ್ಯಾಸ ಏನೂ ಇಲ್ಲ. ಅಂಥಹ ದೊಡ್ಡ ಕಾರಣನೂ ಇಲ್ಲ ಬಿಡಿ. ಅಸಲೀ ವಿಷಯ ಏನಾ...
-
ಇವತ್ತು ಅಕ್ಷಯ ತೃತೀಯ. ಕನ್ನಡ ಪ್ರಭದ ಇಡಿ ಮುಖಪುಟವನ್ನೇ ಶುಭ್ ಜ್ಯುವೆಲ್ಲರ್ಸ್ನ ಜಾಹೀರಾತು ಆಕ್ರಮಿಸಿಕೊಂಡಿದೆ. TV ಚಾನೆಲ್ ತುಂಬೆಲ್ಲ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳ...
-
ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ವಿರಚಿತ ಈ ಗೀತೆ ಜಗತ್ತಿನ ಸಮಸ್ತ ಮಹಿಳೆಯರಿಗೆ ಅರ್ಪಣೆ. ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ...
-
ಆತ ನನ್ನ ಆತ್ಮೀಯ ಗೆಳೆಯ. ಪದವಿಯಲ್ಲಿ ಒಟ್ಟಿಗೆ ಓದಿದ್ದೇವು. ಓದುವಾಗ ಕೇವಲ ಹಾಯ್-ಬಾಯ್ ಫ್ರೆಂಡ್ ಆಗಿದ್ದೇವು. ಪದವಿ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಗೆಳೆತನ ಅತಿಯಾಗು...
Tuesday, March 8, 2011
Sunday, March 6, 2011
ಒಂದು ಮಧುರ ಮೋಸ!

ನಾನು R.T.Nagarಕ್ಕೆ ಬಂದು ಆಗ 2 ತಿಂಗಳಷ್ಟೆ ಆಗಿತ್ತು. ಗೆಳೆಯ ನವೀನ್ ಸಾಗರ phone ಮಾಡಿ ಬರುತ್ತೇನೆ ಅಂದಾಗ ಅವನಿಗೆ ಅಡ್ರೆಸ್ ಹೇಳಿ ‘ಶುಚಿ ಸಾಗರ’ದ ಎದುರು ಬಂದಾಗ ಫೋನ್ ಮಾಡು ಅಂದಿದ್ದೆ. ಅವನು ಫೋನ್ ಮಾಡಿ "ಮಾರಾಯ ಹೋಟೇಲ್ ‘ಸಿಚಿ ಸಾಗರ’ದ ಎದುರು ನಿಂತಿದ್ದೇನೆ. ನೀನು ಹೇಳಿದ ‘ಶುಚಿ ಸಾಗರ’ ಎಲ್ಲೂ ಕಾಣಿಸ್ತಾ ಇಲ್ವೋ... ಇಲ್ಲಿರೋದು ಸಿಚಿಸಾಗರ ಮಾತ್ರ ಕಣೋ" ಅಂದ. ನನಗೆ ನಂಬೋಕೆ ಆಗ್ಲಿಲ್ಲ. ಎರಡು ತಿಂಗಳಿಂದ ದಿನಕ್ಕೆ 3 ಬಾರಿಯಂತೆ ಅದೇ ಹೋಟೇಲ್ಗೆ ಹೋಗಿದ್ದೆ. ನನ್ನಿಂದ ಇಷ್ಟು ದೊಡ್ಡ ಕಣ್ತಪ್ಪೆ..! ನಿನ್ನ ಹೆಸರಲ್ಲೇ ಸಾಗರ ಇರೋದ್ರಿಂದ ನೀನು ಸುಲಭವಾಗಿ ತಪ್ಪನ್ನ ಕಂಡುಹಿಡಿದೆ ಅಂತ ಗೆಳೆಯ ನವೀನ್ ಸಾಗರನನ್ನು ಕಿಚಾಯಿಸಿದ್ದೆ.
ಈಗ ಬಿಡಿ... ಹೋಟೇಲಿನ ಎಲ್ಲ ಸಿಬ್ಬಂದಿ ವರ್ಗದವರ ಜೊತೆ ಒಂದು ಅವಿನಭಾವ ಬಾಂಧವ್ಯ ಬೆಳೆದಿದೆ. ನನಗೀಗ ಅಲ್ಲಿ ವಿಶೇಷವಾದ ಗೌರವ ಸಿಗುತ್ತದೆ. ಹೋಟೇಲಿಗೆ ಕಾಲಿಟ್ಟೊಡನೆ ಕ್ಲೀನರ್ನಿಂದ ಹಿಡಿದು ಕ್ಯಾಶಿಯರ್ವರೆಗೂ ಎಲ್ಲರೂ ಒಂದು ವೆಲ್ ಕಮ್ ನಗುವನ್ನು ನನ್ನೆಡೆಗೆ ಚೆಲ್ಲುತ್ತಾರೆ. ಅಲ್ಲಿರೋರಲ್ಲಿ ನಮ್ಮ ಕುಂದಾಪುರ-ಉಡುಪಿಗೆ ಸೇರಿದವರ ಸಂಖ್ಯೆ ಜಾಸ್ತಿ ಇರುವುದರಿಂದ, ಬಾಂಧವ್ಯನೂ ಸ್ವಲ್ಪ ಜಾಸ್ತಿನೇ ಇದೆ. ಬಿಸಿಬೇಳೆಬಾತ್ order ಮಾಡಿದ್ರೆ, ಒಂದು ಸೌಟು ಹೆಚ್ಚಿಗೆ ಹಾಕಿ ನನ್ನೆದುರು ತಂದಿಡುತ್ತಾರೆ. ಅಷ್ಟೊಂದು ಪ್ರೀತಿ ನನ್ನ ಮೇಲೆ. ಅವರು ಆ ಪ್ರೀತಿ ತೋರಿಸಿದಾಗಲೆಲ್ಲಾ ನನಗೆ "ಆ" ಘಟನೆ ನೆನಪಾಗಿ ಮನಸ್ಸಲ್ಲಿ ಏನೋ ಒಂಥರ ಕಸಿವಿಸಿಯಾಗುತ್ತದೆ.
ಒಂದು ವರ್ಷದ ಹಿಂದಿನ ಮಾತು. ಹೋಟೇಲಿನವರ ಜೊತೆಗೆ ನನಗಿನ್ನೂ ಬಾಂಧವ್ಯ ಕುದುರಿಲ್ಲದ ದಿನವದು. ನಾನು ಆ areaಗೆ ಬಂದು 2 ತಿಂಗಳಷ್ಟೆ ಆಗಿತ್ತು. ಅಂದು ಮಧ್ಯಾಹ್ನ north indian meals ಆರ್ಡರ್ ಮಾಡಿ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕೂತಿದ್ದೆ. "ಸರ್ ನಮಸ್ಕಾರ " ಎಂಬ ಮಾತಿನೊಂದಿಗೆ ವ್ಯಕ್ತಿಯೊಬ್ಬ ನನ್ನೆದುರಿನ ಖುರ್ಚಿಯ ಮೇಲೆ ಬಂದು ಸ್ಥಾಪಿತನಾದ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ನೆನಪಿಸಿಕೊಳ್ಳೋ ಪ್ರಯತ್ನ ಮಾಡಿದೆವು... ಕೊನೆಗೆ ಆತನೇ ನನ್ನ ಮೌನ ಮುರಿದು "ಸರ್... ನೀವು ಸಿನೆಮಾದಲ್ಲಿ work ಮಾಡುತ್ತೀರಿ ತಾನೇ..?" ಅಂದಾಗ ಹೌದು ಅಂತ ತಲೆಯಾಡಿಸಿದೆ. ಅವನು "ನಾನು ಸಾರ್..! ನೀವು ‘ಸವಿ ಸವಿ ನೆನಪು’ ಚಿತ್ರದಲ್ಲಿ associate director ಆಗಿದ್ದಾಗ, ನಿಮ್ಮ ಹತ್ರ ನಟನೆಗಾಗಿ chance ಕೇಳಿಕೊಂಡು ಬಂದಿದ್ದೆ. ನೀವು ಕೊಡುತ್ತೀನಿ ಅಂತ promise ಮಾಡಿ, ಕೊನೆಗೆ ಕೊಡಲೇ ಇಲ್ಲ" ಅಂದ. ಉಹುಂ ನನಗೆ ನಿಜಕ್ಕೂ ಅವನು ಹೇಳಿದ ಘಟನೆ ನೆನಪಿಗೆ ಬರಲೇ ಇಲ್ಲ. ನಾನು ಮರೆತಿರುವುದನ್ನೆ ಆತ ನನ್ನ ಅಹಂಕಾರ ಅಂದುಕೊಂಡಾನೋ ಅಂತ ಭಾವಿಸಿ, ಬಲವಂತದ ನಗುವನ್ನು ತಂದುಕೊಂಡು ಅವನಿಗೆ ಶೇಕ್ ಹ್ಯಾಂಡ್ ಕೊಟ್ಟು ಹೇಗಿದ್ದೀರಿ ಅಂತ ಕೇಳಿದೆ. ಇದನ್ನೆಲ್ಲಾ ಅಲ್ಲೇ ನಿಂತು ಗಮನಿಸುತ್ತಿದ್ದ ಹೋಟೇಲ್ನ supplier ಆ ವ್ಯಕ್ತಿಗೆ ಏನು ಬೇಕೆಂದು ಕೇಳಿದ. ಆತನೂ north indian meals ಅಂತ order ಕೊಟ್ಟ.
ಜೊತೆಯಲ್ಲಿ ಊಟಮಾಡುತ್ತಾ ಇಬ್ಬರ ನಡುವೆ ಚಿತ್ರರಂಗದ ಆಗು-ಹೋಗುಗಳ ಬಗ್ಗೆ discussion ನಡೆಯಿತು. ಆತ ನನಗಿಂತ ಬೇಗ ಊಟ ಮುಗಿಸಿದ್ದ. ಕೈ ತೊಳೆಯಲು ಹೋದವನು ವಾಪಸ್ಸು ಬರುವಾಗ mobileನಲ್ಲಿ ಮಾತನಾಡುತ್ತಾ ಬಂದು ನನಗೆ ಶೇಕ್ ಹ್ಯಾಂಡ್ ಕೊಟ್ಟು "ಸರ್... important ಫೋನ್ ಕಾಲ್ ಇದೆ. ಮತ್ತೊಮ್ಮೆ ಸಿಗುತ್ತೇನೆ" ಎಂದು ಹೇಳಿ ಹೊರಟು ಹೋದ. ನಾನು ನಿಧಾನಕ್ಕೆ ಊಟ ಮುಗಿಸಿ ಕೈತೊಳೆದುಕೊಂಡು ಮತ್ತೆ ಟೇಬಲ್ಲಿಗೆ ಬಂದಾಗ, ನನ್ನ ಬಿಲ್ಲು(bill) ನನಗಾಗಿ ಕಾದಿತ್ತು. ಬಿಲ್ಲನ್ನು ತೆಗೆದುಕೊಂಡು 50 ರೂ ನೋಟಿನ ಜೊತೆಗೆ ಕ್ಯಾಶಿಯರ್ಗೆ ಕೊಟ್ಟಾಗ, ಆತ "ಸರ್... 90 ರೂಪಾಯಿ ಆಗಿದೆ" ಅಂದ. ಒಂದು north indian mealsಗೆ 45 ರೂಪಾಯಿ ಅನ್ನುವುದು ನನಗೆ ಚೆನ್ನಾಗಿ ನೆನಪಿತ್ತು. ಕೂಡಲೇ ಬಿಲ್ಲನ್ನು ನೋಡಿದಾಗ ಅದರಲ್ಲಿ ಆತನ ಊಟದ ಚಾರ್ಜನ್ನೂ ಸೇರಿಸಲಾಗಿತ್ತು. ನಾನು ಕೂಡಲೇ "ಆತ ನನ್ನ ಗೆಳೆಯನಲ್ಲ. ಎಲ್ಲೋ ನೋಡಿದ ನೆನಪಷ್ಟೆ. ಆತನ ಬಿಲ್ಲನ್ನು ನನ್ನ ಜೊತೆ ಸೇರಿಸಿದ್ದು ಎಷ್ಟು ಸರಿ" ಎಂದು ತಗಾದೆ ತೆಗೆದೆ. ಮಾಣಿ confusion ಮಿಶ್ರಿತ ಭಯದಲ್ಲಿ ಏನೂ ಮಾತನಾಡುವುದೆಂದು ತಿಳಿಯದೆ ಒದ್ದಾಡಿದ. ನಾನು ಕೂಡಲೇ "ಹೋಗ್ಲಿ ಬಿಡಿ. ಮುಂದಿನ ಬಾರಿ ಹುಷಾರಾಗಿರಿ" ಎಂದು ಇನ್ನೊಂದು 50 ರ ನೋಟನ್ನ ಕ್ಯಾಶಿಯರ್ ಟೇಬಲ್ ಮೇಲಿಟ್ಟೆ. ಆತ 5 ರೂ ಚಿಲ್ಲರೆ ಜೊತೆ 50 ರ ನೋಟನ್ನು ವಾಪಸ್ಸುಕೊಡುತ್ತಾ "ಸ್ಸಾರಿ ಸರ್... ನಮ್ಮದೆ ತಪ್ಪು. ನಮ್ಮ ಹುಡುಗ ಕೇಳಿ ಬಿಲ್ ಮಾಡಬೇಕಿತ್ತು. ಸ್ಸಾರಿ... ಥ್ಯಾಂಕ್ ಯೂ" ಅಂದ. ನಾನು ನೋಟನ್ನು ಚಿಲ್ಲರೆಯನ್ನು ಜೇಬಿಗಿಳಿಸಿ ಮನೆಕಡೆ ಹೆಜ್ಜೆ ಹಾಕಿದೆ.
ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದೆ. Door ಒಪನ್ ಆದಾಗ ಅದೇ ‘ಆತ’ ಕಣ್ಣು ಮಿಟುಕಿಸಿ ನಗುತ್ತ ಎದುರಲ್ಲಿ ನಿಂತಿದ್ದ. ನಾನು ಒಮ್ಮೆ serious ಆಗಿ ಅವನ ಕಡೆ look ಕೊಟ್ಟು ನಂತರ ಪಳ್ಳನೆ ನಕ್ಕು ಒಳಗೆ ಹೋದೆ. ಇಬ್ಬರೂ 10 ನಿಮಿಷ uncontrolled ಆಗಿ ನಾನ್ ಸ್ಟಾಪ್ ನಗು ನಕ್ಕೆವು. ‘ಆತ’ ಅದೇ ಗೆಳೆಯ. ಶುಚಿಯಲ್ಲ ಸಿಚಿ ಎಂದು ‘ಕಣ್ಣು ತೆರೆಸಿದ್ದ’ ನವೀನ್ ಸಾಗರ.!! ಆವತ್ತು ನನ್ನ ಜೇಬಿನಲ್ಲಿದದ್ದು 100 ರೂಪಾಯಿ ಮಾತ್ರ. ಹಾಗೂ ಅವನ ಜೇಬಿನಲ್ಲಿ ಬಿಡಿಗಾಸೂ ಇರಲಿಲ್ಲ. ಇರುವ 100 ರೂಪಾಯಿಯಲ್ಲಿ ನಾನು ನಾಳೆ(ಗಳನ್ನು)ಯನ್ನು ಕಳೆಯಬೇಕಾಗಿತ್ತು. ನಾಡಿದ್ದು ನನಗೆ ದುಡ್ಡು ಬರುವುದಿತ್ತು( ನಂಬಿ!). ಅಂಥ ದಿನದಲ್ಲಿ ಇಂಥ ಮೋಸವೊಂದು ನಡೆದುಹೋಯಿತು. ಅದರ ಬಗ್ಗೆ ನನಗೆ ವಿಷಾದವಿಲ್ಲ. ಅದಕ್ಕೆ ನಾನದನ್ನು ಕರೆಯುತ್ತೇನೆ "ಒಂದು ಮಧುರ ಮೋಸ" ಎಂದು.
ಈಗಲೂ ನಾನು ಆ ಹೋಟೇಲಿನ ಖಾಯಂ ಗಿರಾಕಿ. ಆದರೆ ನನ್ನ ಗೆಳೆಯ ನವೀನ್ ಸಾಗರ್ ಬಂದಾಗ ಮಾತ್ರ ಬೇರೆ ಹೋಟೇಲ್ ಹುಡುಕಿಕೊಂಡು ಹೋಗುತ್ತೇವೆ. ಎಲ್ಲಾದರೂ ಆ supplier ನಮ್ಮನ್ನು ಗುರುತಿಸಬಹುದು ಎಂಬ ಭಯ ಗೆಳೆಯ ನವೀನನಿಗೆ!. ದುಡ್ಡಿದ್ದರೂ ಆ ಹೋಟೇಲ್ಗೆ ಹೋಗದೆ ಇರೋ ಥರ ಮಾಡ್ಬಿಟ್ಟೆಯಲ್ಲೊ ಪಾಪಿ ಅಂತ ಅವನು ನಗುನಗುತ್ತಾ ರೇಗುತ್ತಾನೆ. ರೇಗಲಿ ಬಿಡಿ. ಯಾಕೆಂದರೆ ಆವತ್ತಿನ ನಮ್ಮ ಮೋಸಕ್ಕೆ screenplay ಹೆಣೆದು ನಿರ್ದೇಶನ ಮಾಡಿದ್ದು ನಾನೇ...!
ಈಗ ಬಿಡಿ... ಹೋಟೇಲಿನ ಎಲ್ಲ ಸಿಬ್ಬಂದಿ ವರ್ಗದವರ ಜೊತೆ ಒಂದು ಅವಿನಭಾವ ಬಾಂಧವ್ಯ ಬೆಳೆದಿದೆ. ನನಗೀಗ ಅಲ್ಲಿ ವಿಶೇಷವಾದ ಗೌರವ ಸಿಗುತ್ತದೆ. ಹೋಟೇಲಿಗೆ ಕಾಲಿಟ್ಟೊಡನೆ ಕ್ಲೀನರ್ನಿಂದ ಹಿಡಿದು ಕ್ಯಾಶಿಯರ್ವರೆಗೂ ಎಲ್ಲರೂ ಒಂದು ವೆಲ್ ಕಮ್ ನಗುವನ್ನು ನನ್ನೆಡೆಗೆ ಚೆಲ್ಲುತ್ತಾರೆ. ಅಲ್ಲಿರೋರಲ್ಲಿ ನಮ್ಮ ಕುಂದಾಪುರ-ಉಡುಪಿಗೆ ಸೇರಿದವರ ಸಂಖ್ಯೆ ಜಾಸ್ತಿ ಇರುವುದರಿಂದ, ಬಾಂಧವ್ಯನೂ ಸ್ವಲ್ಪ ಜಾಸ್ತಿನೇ ಇದೆ. ಬಿಸಿಬೇಳೆಬಾತ್ order ಮಾಡಿದ್ರೆ, ಒಂದು ಸೌಟು ಹೆಚ್ಚಿಗೆ ಹಾಕಿ ನನ್ನೆದುರು ತಂದಿಡುತ್ತಾರೆ. ಅಷ್ಟೊಂದು ಪ್ರೀತಿ ನನ್ನ ಮೇಲೆ. ಅವರು ಆ ಪ್ರೀತಿ ತೋರಿಸಿದಾಗಲೆಲ್ಲಾ ನನಗೆ "ಆ" ಘಟನೆ ನೆನಪಾಗಿ ಮನಸ್ಸಲ್ಲಿ ಏನೋ ಒಂಥರ ಕಸಿವಿಸಿಯಾಗುತ್ತದೆ.
ಒಂದು ವರ್ಷದ ಹಿಂದಿನ ಮಾತು. ಹೋಟೇಲಿನವರ ಜೊತೆಗೆ ನನಗಿನ್ನೂ ಬಾಂಧವ್ಯ ಕುದುರಿಲ್ಲದ ದಿನವದು. ನಾನು ಆ areaಗೆ ಬಂದು 2 ತಿಂಗಳಷ್ಟೆ ಆಗಿತ್ತು. ಅಂದು ಮಧ್ಯಾಹ್ನ north indian meals ಆರ್ಡರ್ ಮಾಡಿ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕೂತಿದ್ದೆ. "ಸರ್ ನಮಸ್ಕಾರ " ಎಂಬ ಮಾತಿನೊಂದಿಗೆ ವ್ಯಕ್ತಿಯೊಬ್ಬ ನನ್ನೆ
ಜೊತೆಯಲ್ಲಿ ಊಟಮಾಡುತ್ತಾ ಇಬ್ಬರ ನಡುವೆ ಚಿತ್ರರಂಗದ ಆಗು-ಹೋಗುಗಳ ಬಗ್ಗೆ discussion ನಡೆಯಿತು. ಆತ ನನಗಿಂತ ಬೇಗ ಊಟ ಮುಗಿಸಿದ್ದ. ಕೈ ತೊಳೆಯಲು ಹೋದವನು ವಾಪಸ್ಸು ಬರುವಾಗ mobileನಲ್ಲಿ ಮಾತನಾಡುತ್ತಾ ಬಂದು ನನಗೆ ಶೇಕ್ ಹ್ಯಾಂಡ್ ಕೊಟ್ಟು "ಸರ್... important ಫೋನ್ ಕಾಲ್ ಇದೆ. ಮತ್ತೊಮ್ಮೆ ಸಿಗುತ್ತೇನೆ" ಎಂದು ಹೇಳಿ ಹೊರಟು ಹೋದ. ನಾನು ನಿಧಾನಕ್ಕೆ ಊಟ ಮುಗಿಸಿ ಕೈತೊಳೆದುಕೊಂಡು ಮತ್ತೆ ಟೇಬಲ್ಲಿಗೆ ಬಂದಾಗ, ನನ್ನ ಬಿಲ್ಲು(bill) ನನಗಾಗಿ ಕಾದಿತ್ತು. ಬಿಲ್ಲನ್ನು ತೆಗೆದುಕೊಂಡು 50 ರೂ ನೋಟಿನ ಜೊತೆಗೆ ಕ್ಯಾಶಿಯರ್ಗೆ ಕೊಟ್ಟಾಗ, ಆತ "ಸರ್... 90 ರೂಪಾಯಿ ಆಗಿದೆ" ಅಂದ. ಒಂದು north indian mealsಗೆ 45 ರೂಪಾಯಿ ಅನ್ನುವುದು ನನಗೆ ಚೆನ್ನಾಗಿ ನೆನಪಿತ್ತು. ಕೂಡಲೇ ಬಿಲ್ಲನ್ನು ನೋಡಿದಾಗ ಅದರಲ್ಲಿ ಆತನ ಊಟದ ಚಾರ್ಜನ್ನೂ ಸೇರಿಸಲಾಗಿತ್ತು. ನಾನು ಕೂಡಲೇ "ಆತ ನನ್ನ ಗೆಳೆಯನಲ್ಲ. ಎಲ್ಲೋ ನೋಡಿದ ನೆನಪಷ್ಟೆ. ಆತನ ಬಿಲ್ಲನ್ನು ನನ್ನ ಜೊತೆ ಸೇರಿಸಿದ್ದು ಎಷ್ಟು ಸರಿ" ಎಂದು ತಗಾದೆ ತೆಗೆದೆ. ಮಾಣಿ confusion ಮಿಶ್ರಿತ ಭಯದಲ್ಲಿ ಏನೂ ಮಾತನಾಡುವುದೆಂದು ತಿಳಿಯದೆ ಒದ್ದಾಡಿದ. ನಾನು ಕೂಡಲೇ "ಹೋಗ್ಲಿ ಬಿಡಿ. ಮುಂದಿನ ಬಾರಿ ಹುಷಾರಾಗಿರಿ" ಎಂದು ಇನ್ನೊಂದು 50 ರ ನೋಟನ್ನ ಕ್ಯಾಶಿಯರ್ ಟೇಬಲ್ ಮೇಲಿಟ್ಟೆ. ಆತ 5 ರೂ ಚಿಲ್ಲರೆ ಜೊತೆ 50 ರ ನೋಟನ್ನು ವಾಪಸ್ಸುಕೊಡುತ್ತಾ "ಸ್ಸಾರಿ ಸರ್... ನಮ್ಮದೆ ತಪ್ಪು. ನಮ್ಮ ಹುಡುಗ ಕೇಳಿ ಬಿಲ್ ಮಾಡಬೇಕಿತ್ತು. ಸ್ಸಾರಿ... ಥ್ಯಾಂಕ್ ಯೂ" ಅಂದ. ನಾನು ನೋಟನ್ನು ಚಿಲ್ಲರೆಯನ್ನು ಜೇಬಿಗಿಳಿಸಿ ಮನೆಕಡೆ ಹೆಜ್ಜೆ ಹಾಕಿದೆ.
ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದೆ. Door ಒಪನ್ ಆದಾಗ ಅದೇ ‘ಆತ’ ಕಣ್ಣು ಮಿಟುಕಿಸಿ ನಗುತ್ತ ಎದುರಲ್ಲಿ ನಿಂತಿದ್ದ. ನಾನು ಒಮ್ಮೆ serious ಆಗಿ ಅವನ ಕಡೆ look ಕೊಟ್ಟು ನಂತರ ಪಳ್ಳನೆ ನಕ್ಕು ಒಳಗೆ ಹೋದೆ. ಇಬ್ಬರೂ 10 ನಿಮಿಷ uncontrolled ಆಗಿ ನಾನ್ ಸ್ಟಾಪ್ ನಗು ನಕ್ಕೆವು. ‘ಆತ’ ಅದೇ ಗೆಳೆಯ. ಶುಚಿಯಲ್ಲ ಸಿಚಿ ಎಂದು ‘ಕಣ್ಣು ತೆರೆಸಿದ್ದ’ ನವೀನ್ ಸಾಗರ.!! ಆವತ್ತು ನನ್ನ ಜೇಬಿನಲ್ಲಿದದ್ದು 100 ರೂಪಾಯಿ ಮಾತ್ರ. ಹಾಗೂ ಅವನ ಜೇಬಿನಲ್ಲಿ ಬಿಡಿಗಾಸೂ ಇರಲಿಲ್ಲ. ಇರುವ 100 ರೂಪಾಯಿಯಲ್ಲಿ ನಾನು ನಾಳೆ(ಗಳನ್ನು)ಯನ್ನು ಕಳೆಯಬೇಕಾಗಿತ್ತು. ನಾಡಿದ್ದು ನನಗೆ ದುಡ್ಡು ಬರುವುದಿತ್ತು( ನಂಬಿ!). ಅಂಥ ದಿನದಲ್ಲಿ ಇಂಥ ಮೋಸವೊಂದು ನಡೆದುಹೋಯಿತು. ಅದರ ಬಗ್ಗೆ ನನಗೆ ವಿಷಾದವಿಲ್ಲ. ಅದಕ್ಕೆ ನಾನದನ್ನು ಕರೆಯುತ್ತೇನೆ "ಒಂದು ಮಧುರ ಮೋಸ" ಎಂದು.
ಈಗಲೂ ನಾನು ಆ ಹೋಟೇಲಿನ ಖಾಯಂ ಗಿರಾಕಿ. ಆದರೆ ನನ್ನ ಗೆಳೆಯ ನವೀನ್ ಸಾಗರ್ ಬಂದಾಗ ಮಾತ್ರ ಬೇರೆ ಹೋಟೇಲ್ ಹುಡುಕಿಕೊಂಡು ಹೋಗುತ್ತೇವೆ. ಎಲ್ಲಾದರೂ ಆ supplier ನಮ್ಮನ್ನು ಗುರುತಿಸಬಹುದು ಎಂಬ ಭಯ ಗೆಳೆಯ ನವೀನನಿಗೆ!. ದುಡ್ಡಿದ್ದರೂ ಆ ಹೋಟೇಲ್ಗೆ ಹೋಗದೆ ಇರೋ ಥರ ಮಾಡ್ಬಿಟ್ಟೆಯಲ್ಲೊ ಪಾಪಿ ಅಂತ ಅವನು ನಗುನಗುತ್ತಾ ರೇಗುತ್ತಾನೆ. ರೇಗಲಿ ಬಿಡಿ. ಯಾಕೆಂದರೆ ಆವತ್ತಿನ ನಮ್ಮ ಮೋಸಕ್ಕೆ screenplay ಹೆಣೆದು ನಿರ್ದೇಶನ ಮಾಡಿದ್ದು ನಾನೇ...!
Saturday, March 5, 2011
ಬ್ಲಾಗು ಬರೆಯೋದಕ್ಕೆ ಕಾರಣ

ಬ್ಲಾಗು ಬರೆಯೋದಕ್ಕೆ ಕಾರಣ? ಅಥವಾ ರಾಘು ಬರೆಯೋದಕ್ಕೆ ಕಾರಣ? ಇವರೆಡು ಪ್ರಶ್ನೆಗಳಲ್ಲಿ ಜಾಸ್ತಿ ವ್ಯತ್ಯಾಸ ಏನೂ ಇಲ್ಲ. ಅಂಥಹ ದೊಡ್ಡ ಕಾರಣನೂ ಇಲ್ಲ ಬಿಡಿ. ಅಸಲೀ ವಿಷಯ ಏನಾಪ್ಪ ಅಂದರೆ, ನನಗೆ ನನ್ನದೇ ಸ್ವಂತದ್ದೊಂದು ಬ್ಲಾಗು ಬರೆಯಬೇಕು ಅನ್ನೋದು ಬಹಳ ದಿನದ ಆಸೆಯಾಗಿತ್ತು. ಅದಕ್ಕಾಗಿ 6 ತಿಂಗಳ ಹಿಂದೆ ಈ ಬ್ಲಾಗನ್ನು ರೆಡಿ ಮಾಡಿಟ್ಟುಕೊಂಡು ಕೂತಿದ್ದೆ. ಆದರೆ ಒಂದಕ್ಷರಾನೂ ನನ್ನಿಂದ ಬರೆಯಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಬ್ಲಾಗು ಯಾಕೆ ಬೇಕು? ಅದನ್ನ ಯಾಕೆ ಬರೆಯಬೇಕು? ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಅದಕ್ಕೆ ಉತ್ತರವೂ ನನಗೆ ಬೇಕಿರಲಿಲ್ಲ. ಯಾಕೆಂದರೆ ಈ ಬ್ಲಾಗ್ನಿಂದ ನನಗೆ ಆಗಬೇಕಾದದ್ದು ಏನೂ ಇಲ್ಲ. ಆದರೂ ನಾನು ಬ್ಲಾಗು ಬರೆಯಬೇಕು. ಚಿಕ್ಕ ಮಗುವಿನಂಥ ಹಠ ನನ್ನದು. ಆ ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ. ಅದೊಂದು ಚಿಕ್ಕ ಆಸೆ ಅಷ್ಟೆ! ಇಂಥಹ ಚಿಕ್ಕ ಚಿಕ್ಕ ಆಸೆಗಳಿಂದ ಸಂತೋಷ ಪಡುವುದು ಚಟವಾಗಿ ಬಿಟ್ಟಿದೆ ನನಗೆ . ಆದರೆ ಈ ಆಸೆ ಮೊಳಕೆ ಒಡೆದದ್ದು ಒಂದು ಥರನಾದ jealousನಿಂದ ಅಂದರೆ ನೀವು ನಂಬಲೇ ಬೇಕು. ಹೌದು... ಹೊಟ್ಟೆಕಿಚ್ಚು ಪಡುವಂತೆ ಬರೆದ ಕೆಲವರ ಬ್ಲಾಗುಗಳನ್ನು ಓದಿ, ನನಗೂ ಬ್ಲಾಗು ಬರೆಯಬೇಕು ಅನ್ನಿಸಿತು. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಜೊತೆಗೆ ಇದರಿಂದ ನನಗೆ ಆಗುವ ನಷ್ಟವೇನೂ...? ಇದನ್ನು ಓದಿದವರಿಗೂ ಆಗುವ ನಷ್ಟವೇನು..? ಇವನ್ನೆಲ್ಲಾ ತುಂಬಾ deep ಆಗಿ ಯೋಚಿಸಿದಾಗ, ನನಗೇನೂ ಅಂಥಹ ಹೇಳಿಕೊಳ್ಳುವ ನಷ್ಟವಿಲ್ಲ. ಆದರೆ ಓದುವವರಿಗೆ...? ಎಲ್ಲೋ ಅವರಿಗೆ ನನ್ನ ಬರಹಗಳು ತಲೆನೋವು ತಂದರೆ, ಒಂದು ಅನಾಸಿನ್ waste ಆಗಬಹುದೇನೋ ಅಷ್ಟೇ..! ಅದು ಬಿಟ್ಟರೆ ಅವರಿಗೂ ಅಂಥಹ ಹೇಳಿಕೊಳ್ಳುವ ನಷ್ಟವಿಲ್ಲ. ಜೊತೆಗೆ face bookನಲ್ಲಿ ಕೆಮ್ಮಿದರೂ ರಿಪ್ಲೈ ಮಾಡುವಂಥ ನನ್ನ ಗೆಳೆಯರು, ನನ್ನ ಬರಹಕ್ಕೆ ಒಂದಷ್ಟು ಒಳ್ಳೆಯ ಕಮೆಂಟ್ ಮಾಡದೇ ಇರುತ್ತಾರೆಯೇ..? ಇಂಥಹ over confident ನಿಲುವುಗಳಿಂದ ಕೊನೆಗೂ ಬ್ಲಾಗು ಬರೆಯಲೇ ಬೇಕೆಂದು ನಿರ್ಧರಿಸಿದೆ.
Subscribe to:
Posts (Atom)