Popular Posts

Wednesday, August 10, 2011

I Hate Friendship Day

ಆತ ನನ್ನ ಆತ್ಮೀಯ ಗೆಳೆಯ. ಪದವಿಯಲ್ಲಿ ಒಟ್ಟಿಗೆ ಓದಿದ್ದೇವು. ಓದುವಾಗ ಕೇವಲ ಹಾಯ್-ಬಾಯ್ ಫ್ರೆಂಡ್ ಆಗಿದ್ದೇವು. ಪದವಿ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಗೆಳೆತನ ಅತಿಯಾಗುವಷ್ಟು ಗಾಢವಾಯಿತು. ನಮ್ಮ ನಡುವೆ ಯಾವತ್ತು ಬಿನ್ನಾಭಿಪ್ರಾಯ ಬಂದಿರಲಿಲ್ಲ. ನಿಜ ಹೇಳಬೇಕೆಂದರೆ ನಾವಿಬ್ಬರು gay ಆಗಿದಿದ್ದರೆ ಖಂಡಿತ ಮದುವೆಯಾಗುತ್ತಿದ್ದೇವು(now its legal). ಮುಂದೇನೂ ಆ ಸಾಧ್ಯತೆಗಳು ಇಲ್ಲ ಬಿಡಿ. ಆತನಿಗೀಗ ಮದುವೆ ಆಗಿದೆ. ನಮ್ಮಿಬ್ಬರ ಗೆಳೆತನದ ಬಗ್ಗೆ ಆತನ ಹೆಂಡತಿಗೂ ಹೆಮ್ಮೆ ಇದೆ. ಸದಾ ನನ್ನ ಸುಖ-ದುಃಖಗಳಲ್ಲಿ ಆತ ಬೆನ್ನೆಲುಬಾಗಿ ನಿಂತಿದ್ದಾನೆ. ಆದರೆ ನಿನ್ನೇ ಆತ ನನ್ನ ಮೇಲೆ ಮೊದಲ ಬಾರಿಗೆ ಮುನಿಸಿಕೊಂಡಿದ್ದಾನೆ. ಕಾರಣ friendship dayಗೆ ನಾನು wish ಮಾಡದೇ ಇದ್ದಿದ್ದಕ್ಕೆ! ನನಗೆ ನಗಬೇಕೋ... ಅಳಬೇಕೋ... ತಿಳಿಯಲಿಲ್ಲ.

"ನಮ್ಮಿಬ್ಬರ ಗೆಳೆತನ ಇಂಥಹ ಅರ್ಥಹೀನ ಆಚರಣೆಗಳಿಗಿಂತ ಮಿಗಿಲಾದದ್ದು" ಅಂತ ಒಂದು text msg ಕಳಿಸಿದೆ. ಬಹಳ ಹೊತ್ತು ಉತ್ತರಕ್ಕಾಗಿ ಕಾದೆ. ಬರಲಿಲ್ಲ! ನನ್ನ ಮೇಲೆ ಇನ್ನು ಕೋಪವಿರಬಹುದೇ ಎಂಬ ಅನುಮಾನ ಮನಸ್ಸಿಗೆ ಬಂದರೂ, ಆತನ ಬಗ್ಗೆ ನಂಬಿಕೆ ಇತ್ತು. ಬಹುಶಃ ಉತ್ತರ ತುಂಬಾ ದೊಡ್ಡದಿರಬಹುದೆಂದು guess ಮಾಡಿದೆ. ನನ್ನ ಊಹೆ ಸರಿಯಾಗಿತ್ತು. ಆತನಿಂದ ಉತ್ತರ ಬಂತು. "ಹೌದು....... ನಾನೇ ನಿಂಗೆ friendship dayಗೆ wish ಮಾಡಬಹುದಿತ್ತಲ್ವಾ..? ನಾನ್ಯಾಕ್ ಮಾಡಿಲ್ಲ? ನಾನ್ಯಾಕೆ ಮೊದಲು ನೀನೇ wish ಮಾಡಲಿ ಅಂತ expect ಮಾಡ್ದೆ? ಯುಗಾದಿ, ಗಣೇಶ ಹಬ್ಬ, ಸ್ವಾತಂತ್ರ್ಯೋತ್ಸವಕ್ಕೆಲ್ಲಾ..​. ಎಲ್ಲರಿಗಿಂತ ಮೊದಲು ನಾನೇ wish ಮಾಡಲು ಹೆಮ್ಮೆಯೆನಿಸುತ್ತಿತ್ತು. ನಿನ್ನೇ ಯಾಕೆ ಹೀಗಾಯ್ತು? ಕ್ಷಮಿಸು ಗೆಳೆಯ.... I hate this friendship day! I am really sorry"

ಆತನ ಉತ್ತರ ನೋಡಿ ಮೂಡಿದ ನಗು ಮುಖದಿಂದ ಇನ್ನು ಮಾಸಿಲ್ಲ. ನಾನು ಉತ್ತರ ಕಳುಹಿಸಿದೆ. "Me too ಗೆಳೆಯ. Even I hate........."

1 comment:

  1. gud1... I hate Friendship Day Too.... but for the different reason!

    ReplyDelete