Popular Posts

Tuesday, March 8, 2011

ಸ್ತ್ರೀ... ಸ್ತ್ರೀಯಾಗೇ ಉಳಿಯಲಿ!

ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ವಿರಚಿತ ಈ ಗೀತೆ ಜಗತ್ತಿನ ಸಮಸ್ತ ಮಹಿಳೆಯರಿಗೆ ಅರ್ಪಣೆ. 
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....

ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....

ಮನೆಮನೆಯಲಿ ದೀಪ ಉರಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....
ಮತ್ತೊಂದು ದಿನ ಬಂದಿದೆ. Women's Day ಅಂತೆ. ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ. ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಕನ್ನಡಪ್ರಭ ನೋಡಿದಾಗಲೇ ಗೊತ್ತಾಗಿದ್ದು. ತಾಯಿಗೆ ಫೋನ್ ಮಾಡಿ wish ಮಾಡ್ದೆ. ‘ಅದ್ಯಾವುದೋ ಸುಡುಗಾಡು ಡೇ ?’ ಅಂದ್ರು. ನಮ್ಮಜ್ಜಿಗೆ ಫೋನ್ ಮಾಡಿದ್ರೆ ಇನ್ನೇನ್ ಬಯ್ತಾ ಇದ್ರೊ ಗೊತ್ತಿಲ್ಲ. ಈ fathers day, mothers day, valentines day, uncles day, aunty's day ಎಷ್ಟೊಂದು ದಿನಗಳು. ಮುಂದೆ S*X ಡೇ ಅಂತಾನೂ ಬರಬಹುದು. ಆವಾಗ ಯಾರು ಯಾರಿಗ್ ಬೇಕಾದ್ರೂ open ಆಗಿ ಕೇಳ್‍ಬಹುದು. ಯಾರು ಬೇಜಾರ್ ಮಾಡ್ಕೊಂಡ್ ಉಗಿಯುವ ಪ್ರಸಂಗಾನೂ ಇರಲ್ಲ. ಯಾಕೆಂದ್ರೆ Media ಅಷ್ಟೊಂದು ಪ್ರಚಾರ ಕೊಟ್ಟು already ಎಲ್ಲರ brain wash ಮಾಡಿರುತ್ತೆ. ಮುಂಚೆ ಯಾವುದಾದ್ರೂ ಹುಡುಗಿಗೆ ಲವ್ ಲೆಟರ್ ಕೊಟ್ರೆ ಚಪ್ಪಲಿ ಸೇವೆ ಅಥವಾ ಕೈಯಾರೆ ಮಂಗಳಾರತಿ ಆಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಹುಡುಗಿರು ಅದನ್ನ sportive ಆಗಿ ತಗೋತಾರೆ. "Not Interested" ಅಂತ casual ಆಗಿ ಹೇಳುವಷ್ಟು ಮುಂದುವರೆದಿದ್ದಾರೆ. So... "ಆ" ಡೇ ವಿಷದಲ್ಲೂ ಹಾಗೇ ಆಗಬಹುದೇನೋ...?! ಮುಂಚೆ ಈ ಯಾವ ದಿನಗಳು ಇರಲಿಲ್ಲ. ಅದರ ಅವಶ್ಯಕತೆನೂ ನಮಗೆ ಇರಲಿಲ್ಲ . ಇದನ್ನ ಇಲ್ಲಿಗೆ ನಿಲ್ಸೋಣ... ಮತ್ತೆ ಈ ಬಗ್ಗೆ ಹೇಳ್ತಾ ಹೋದ್ರೆ... ನಮಗೆ ‘ಸಂಸ್ಕ್ರತಿ ರಕ್ಷಕ, RSS ಗುಲಾಮ’ ಅನ್ನೋ ಪಟ್ಟ ಕಟ್ಟೋ ಸಾಧ್ಯತೆ ಇದೆ.
ಇತ್ತೀಚೆಗೆ Paper ಓದಿದ್‍ಮೇಲೆ face book ನೋಡೋದು ದಿನಚರಿಯಾಗ್ ಬಿಟ್ಟಿದೆ. ನಮ್ಮ ಮುಖಪುಟ(face book)ದ ಗೋಡೆ(wall) ಮೇಲೆಲ್ಲಾ ಬರೀ Women's Day ಮೆಸೇಜ್‍ಗಳು. ಯಾಕೋ ಎಲ್ಲರಿಗೂ ಇವತ್ತು ಮಹಿಳೆಯರ ಮೇಲೆ ವಿಪರೀತ ಅಭಿಮಾನ-ಪ್ರೀತಿ ಉಕ್ಕಿ ಹರಿತಾ ಇದೆ ಅನ್ನಿಸೋಕೆ ಶುರುವಾಯ್ತು. ನಾವು ಒಂದು ದಿನ ಕನ್ನಡ ರಾಜ್ಯೋತ್ಸವ ಆಚರಿಸಿದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಭಾಷೆ ಬಗ್ಗೆ ಅಭಿಮಾನ ದಿನಾಲೂ ಇದ್ದೆ ಇರುತ್ತದೆ. ದೇಶಾಭಿಮಾನದ ವಿಚಾರದಲ್ಲೂ ಹಾಗೇ..! ಅದೇ ರೀತಿ ಮಹಿಳಾ ಮೇಲಿನ ಗೌರವ-ಪ್ರೀತಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ. ಅದೂ ಗಂಗೆಯಂತೆ ನಿರಂತರವಾಗಿ ಹರಿಯಲಿ. ‘ಸ್ತ್ರೀ’ ಗೆ ವಿಶೇಷವಾದ ಗೌರವ ಸ್ಥಾನ-ಮಾನ ಕೊಟ್ಟ ದೇಶ ನಮ್ಮದು. ಹಾಗೇ ‘ಸ್ತ್ರೀ’ಯನ್ನು ವಿಪರೀತವಾಗಿ ಶೋಷಿಸಿದ ದೇಶ ಕೂಡ ಹೌದು...! ಆ ಗೌರವ ಪ್ರೀತಿ ಹಾಗೇ ಉಳಿಯಲಿ. ಶೋಷಣೆ ಮಾತ್ರ ಅಳಿಯಲಿ.
ಸ್ತ್ರೀ.... ಎಡೆಗೆ ನಮ್ಮ ದೃಷ್ಟಿಕೋನವು ಬದಲಾಗಲಿ!                                   ಸ್ತ್ರೀ... ಸ್ಪೂರ್ತಿಯಾಗಲಿ!                                                                    ಸ್ತ್ರೀ... ಸಬಲೆಯಾಗಲಿ!                                                                       ಸ್ತ್ರೀ... ನಮಗೆ ಸರಿಸಾಟಿಯಾಗಿ ನಿಲ್ಲಲಿ!                                                 ಸ್ತ್ರೀ... ದೇವರಾಗಲಿ!                                                                          ಸ್ತ್ರೀ... ತಾಯಿಯಾಗಲಿ!                                                                     ಸ್ತ್ರೀ.... ಸ್ತ್ರೀಯಾಗೆ ಉಳಿಯಲಿ!                                                                    
ಜಗತ್ತಿನ ಸಮಸ್ತ ಮಹಿಳೆಯರಿಗೂ ‘ಮಹಿಳಾ ದಿನಾಚರಣೆಯ ಶುಭಾಶಯಗಳು’. Happy Women's Day
                                                                                                                                                                                                              

1 comment:

  1. nanna paravagiu ee article voduva ella mahileyarige ‘ಮಹಿಳಾ ದಿನಾಚರಣೆಯ ಶುಭಾಶಯಗಳು’.

    ReplyDelete